ಆಪ್ತಮಿತ್ರ (2004) - ಬಾರಾ ಸನಿಹಕೆ ಬಾರಾ! ಹಾಡಿದವರು : ನಂದಿತಾ, ರಾಜೇಶ್ ಸಾಹಿತ್ಯ : ಗೋಟೂರಿ ಸಂಗೀತ : ಗುರು ಕಿರಣ್
ಹೆಣ್ಣು : ಬಾರಾ... ಬಾರಾ ಸನಿಹಕೆ ಬಾರಾ ಬಾರ ಸನಿಹಕೆ ಬಾರಾ ನನ್ನ ಕಣ್ಣೀರ ಕಣ್ಣಾರೆ ನೀ ನೋಡೆಯ ನನ್ನ ವ್ಯಥೆ ಎಲ್ಲ ಮನಸಾರೆ ನೀ ಕೇಳೆಯಾ ನನ್ನ ಕಣ್ಣೀರ ಕಣ್ಣಾರೆ ನೀ ನೋಡೆಯ ನನ್ನ ವ್ಯಥೆ ಎಲ್ಲ ಮನಸಾರೆ ನೀ ಕೇಳೆಯಾ ಬಾರೋ ನೀ ಬೇಗ ಈ ವೇಳೆ ಮನದ ದುಗುಡ ತುಮುಲ ಅಳಿಸಿ ಉಳಿಸಲು ಬಾರಾ..
ಹೆಣ್ಣು : ಸುಂದರ ವದನ .. ಸುಂದರ ವದನ ಅಭಿನವ ಮದನ ರಸಮಯ ಲೋಕ ನಮದೇ ಬಾ ಬಳಿ ಸೇರಲು ಹೀಗೆ ನಡುಗುವೆಯಾ ಸುಖ ನೀಡಲು ನೀನು ಹೆದರುವೆಯಾ ಸಾಕು ನಿನ್ನ ತಳಮಳ ಒಲವ ನೆನಪು ಪುಳಕ ನೆನೆದು ಕರೆಯಲು
ಹೆಣ್ಣು : ತೋಂ ತೋಂ ತೋಂ ತೋಂ ತೋಂ ತೋಂ.. ಬಾರಾ..
ಹೆಣ್ಣು : ಆಸೆಯ ರಾಶಿ ವಯಸಲಿ ಸುಳಿದಾಡಿ ಸೇರಿತೀಗ ನಿನ ಕೋರಿ
ಗಂಡು : ಕೋರಿಕೆ ನೂರು ಮನದಲಿ ನಲಿದಾಡಿ ತೇಲಿತೀಗ ನಿನ ಸೇರಿ
ಹೆಣ್ಣು : ಪ್ರಿಯತಮಾ..
ಗಂಡು : ಪ್ರೀತಿಗೆ ಸ್ವಾಗತ ನಮ್ಮ ಪ್ರೀತಿಯೇ ಶಾಶ್ವತ
ಹೆಣ್ಣು : ಪ್ರಿಯತಮಾ...
ಗಂಡು : ಪ್ರೀತಿಯೇ ಜೀವನ ಅದು ಸೌಖ್ಯಕೆ ಕಾರಣ
ಹೆಣ್ಣು : ನನ್ನ ಕಣ್ಣೀರ ಕಣ್ಣಾರೆ ನೀ ನೋಡೆಯಾ ನನ್ನ ವ್ಯಥೆ ಎಲ್ಲ ಮನಸಾರೆ ನೀ ಕೇಳೆಯಾ ಬಾರೋ ನೀ ಬೇಗ ಈ ವೇಳೆ ಮನದ ದುಗುಡ ತುಮಲ ಅಳಿಸಿ ನಲಿಸಲು ಬಾರಾ..